Temple

What do you do on the first birthday after death? 

ದೇಗುಲ

ಗಂಟೆ ಜಾಗಟೆ ತಮಟೆ ವಾದ್ಯಗಳ ದನಿಯಿಲ್ಲ
ಬರಿ ಮೌನ, ಬರಿ ಧ್ಯಾನ
ಭಕುತರ ಮನಗಳಲಿ ಹಳೆಯದೇ ಬೇಡಿಕೆ
ಮತ್ತದೇ ಪ್ರಾರ್ಥನೆ
ಹೋಮಕುಂಡದ ಒಳಗೆ ಎಳ್ಳುದೀಪ
ತೀರ್ಥಕ್ಕೆ ತುಳಸಿ ಎಲೆ
ಆರತಿಗೆ ಕರ್ಪೂರ
ಮುಂಜಾನೆ ಮುತ್ತೈದೆ
ಸಂಜೆ ಹುಡುಗರ ದಂಡು
ದಿನವೆಲ್ಲ ಜನಜಾತ್ರೆ
ಕುರುಡು ಯಾತ್ರೆ

ಬಿಳಿ ಹೊದ್ದ ಅರ್ಚಕರ
ಮುಖದಲ್ಲಿ ಅದೇ ನಗುವು
ಕಾಲ್ಮುಟ್ಟಿ, ಕೈ ಹಿಡಿದು
ಮೌನದಲೆ ಮಾತಾಡಿ
ಮನೆಗೆ ಹೊರಳುವ ಮುನ್ನ
ಒಮ್ಮೆ ನೋಡುವ ಬಯಕೆ
ತಡೆಯಲಾಗದು ಮನಕೆ
ಗರ್ಭಗುಡಿ ಒಳಹೊಕ್ಕು
ಎಲ್ಲೆಲ್ಲಿ ಹುಡುಕಿದರು
ಕತ್ತಲೆಯ ಕೋಣೆಯಲಿ
ದೇವರಿಲ್ಲ

Advertisements
Explore posts in the same categories: Home, Kannada, Literature

9 Comments on “Temple”


  1. ಚೆನ್ನಾಗಿದೆ. ಬಹಳ ಕಾಲದ ನಂತರ ನಿಮ್ಮ ಬ್ಲಾಗಲ್ಲಿ ಕನ್ನಡ ಕಾಣ್ತಿದೆ. ಬರೀತಿರಿ ಅಲ್ವಾ?

  2. sunaath Says:

    ಆಡಂಬರ ಹಾಗು ವ್ಯಾಪಾರೀಕರಣಗಳು ಹೆಡೆಯೆತ್ತಿದಲ್ಲಿ ದೇವರಿಗೆಲ್ಲಿ ಜಾಗ? ಕವಿತೆ ಸೊಗಸಾಗಿ ಮೂಡಿದೆ. (ದಿನಕರ ದೇಸಾಯಿಯವರ ಹಳೆಯ ಕವಿತೆಯೊಂದು ನೆನಪಾಯಿತು: ಹರಿಗೆ ಎಂದು ಗುಡಿಯನೊಂದು ಕಟ್ಟುತಿರುವೆಯಾ?)

  3. praneshachar Says:

    devara gudi bagge ondu artha garbhita kavana
    chennagide hardika shubhashyagalu

  4. Veena Says:

    oh.. ivattu nimma tande birthday na…?
    Amen…

  5. neelanjana Says:

    I kaviteyanna nenneyE Odide innondu kaDe 🙂 konegU tere sarisalu siddhavAgiruva hAge kANatte 😉 ?

  6. neelanjana Says:

    ಕವಿತೆ ಚೆನ್ನಾಗಿದೆ ಅಂತ ಹೇಳೋದು ಮರ್ತೆ – ಚೆನ್ನಾಗಿದೆ – ’ಕರ್ಪೂರದಾರತಿಯ ಜ್ಯೋತಿಯಿಲ್ಲ’ ಅಂತ ಕುವೆಂಪು ಹಾಡಿದ್ದು ನೆನಪಾಯಿತು. ಆದರೆ, ಇಲ್ಲಿ ದೇವರೇ ಇಲ್ಲ!

  7. Manaswini Says:

    ಚಂದದ ಕವಿತೆ. ಇಷ್ಟವಾಯಿತು.

  8. Shiv Says:

    ಹೌದಲ್ವಾ..
    ಸಾವಿನ ನಂತರ ಮೊದಲ ಜನ್ಮದಿನ…
    ಹೇಗಿರಬಹುದು ?
    ಕವನ ಚೆನ್ನಾಗಿದೆ


  9. @ Sunaath:
    Thank you. Haven’t read DD’s poem.

    @ Praneshachar:
    Thank you sir.

    @ Veena:
    Yes, avattu.

    @ Neelanjana:
    Thank you. Haven’t read Kuvempu’s poem either 😦 Actually, quite a few people who visit the blog know who I am. I don’t make extraordinary effort to keep it a secret 🙂

    @ Manaswini:
    Thanks for visitng my blog and thanks for the comment.

    @ Shiv:
    Yep, quite haunting. Thanks.


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s


%d bloggers like this: