One Year Later

I will just post a poem which my mother wrote. As for my feelings, I will just keep it within myself!!!

ಮುಂದೇನೋ???

ಈಗೀಗ ನಮ್ಮ ಮನೆ
ಗೇಟು ಕಿರುಗುಡುವುದಿಲ್ಲ
ಕದ ಬಡಿಯುವುದಿಲ್ಲ
ಫೋನು ರಿಂಗಣಿಸುವುದಿಲ್ಲ
ಮನೆಗೆ ಬರುವವರಿಲ್ಲ
ನೀನಳಿದ ಮೇಲೆ ಸಖ
ಮನೆಗೆ ನಾನೊಬ್ಬಳೆಯೆ
ಉಸಿರಿಡುತಿಹ ಒಬ್ಬೊಂಟಿ!!

ಈಗೀಗ ನಮ್ಮ ಮನೆ
ಗಿಡಬಳ್ಳಿ ನಗುವುದಿಲ್ಲ
ಹೂವು ಅರಳುವುದಿಲ್ಲ
ತೋಟ ಲಕಲಕ ಹೊಳೆಯುವುದಿಲ್ಲ
ಗಿಡಬಳ್ಳಿಗಳಿಗೆ ನೀರೂಡುವವರಿಲ್ಲ
ನೀನಳಿದ ಮೇಲೆ ಸಖ
ಮನೆಗೆ ನಾನೊಬ್ಬಳೆಯೆ
ಉಸಿರಿಡುತಿಹ ಒಬ್ಬೊಂಟಿ!!

ಈಗೀಗ ನಮ್ಮ ಮನೆ
ಅಡಿಗೆಮನೆ ಘಮಗುಡುವುದಿಲ್ಲ
ಹಬ್ಬಹರಿದಿನದ ಸಂಭ್ರಮವಿಲ್ಲ
ಭಕ್ಷ್ಯಭೋಜ್ಯಗಳಿಲ್ಲ
ತಿನ್ನುವಾಸಕ್ತಿ ಇಲ್ಲ
ನೀನಳಿದ ಮೇಲೆ ಸಖ
ಮನೆಗೆ ನಾನೊಬ್ಬಳೆಯೆ
ಉಸಿರಿಡುತಿಹ ಒಬ್ಬೊಂಟಿ!!

ಈಗೀಗ ನಮ್ಮ ಮನೆ
ಪುಸ್ತಕ ಭಂಡಾರ ತೆರೆಯುವುದಿಲ್ಲ
ಪತ್ರಿಕೆಯ ಓದುವವರಿಲ್ಲ
ಕಥೆಕಾವ್ಯ ಬರೆಯುವವರಿಲ್ಲ
ಕಣ್ಣೆಲ್ಲ ಬರಿ ಮಂಜು ಮಂಜು
ನೀನಳಿದ ಮೇಲೆ ಸಖ
ಮನೆಗೆ ನಾನೊಬ್ಬಳೆಯೆ
ಉಸಿರಿಡುತಿಹ ಒಬ್ಬೊಂಟಿ!!

ಈಗೀಗ ನಮ್ಮ ಮನೆ
ರೇಡಿಯೊ ಹಾಡುವುದಿಲ್ಲ
ತಂಬೂರಿ ಸ್ವರವಿಲ್ಲ
ಕಂಠಕುಸಿರೇ ಇಲ್ಲ
ಕಿವಿಯೆಲ್ಲ ಬರಿ ಮಂದ ಮಂದ
ನೀನಳಿದ ಮೇಲೆ ಸಖ
ಮನೆಗೆ ನಾನೊಬ್ಬಳೆಯೆ
ಉಸಿರಿಡುತಿಹ ಒಬ್ಬೊಂಟಿ!!

ಭಣಗುಡುವ ಮುಂಜಾನೆ ಸಂಜೆಯಲಿ
ಇರುಳ ನೀರವತೆಯಲಿ
ಕ್ಷಣವ ಯುಗ ಮಾಡುತ್ತ
ತೆವಳುತಿಹ ಈ ಕಾಲ
ಸರಿವ ಲಕ್ಷಣವಿಲ್ಲ
ನೀನಳಿದ ಮೇಲೆ ಸಖ
ಮನೆಗೆ ನಾನೊಬ್ಬಳೆಯೆ
ಉಸಿರಿಡುತಿಹ ಒಬ್ಬೊಂಟಿ!!

ಜೀವಸಖ ನೀನಿರುವ ತನಕ
ಸ್ವರ್ಗವೇ ಇಳೆಗಿಳಿದು ಬಂದಂತಿತ್ತು
ಜೋಡಿ ಹಕ್ಕಿಯ ಬಾಳು
ಹಾಡಾಗಿ ಹರಿದಿತ್ತು
ಏಕೆ ನಡೆದೆಯೊ ಹೀಗೆ
ನಡುನೀರಿನಲಿ ಬಿಟ್ಟು
ಒಂಟಿ ಬಾಳಿಗೆ ತಳ್ಳಿ
ಕಣ್ಣೀರ ಕಥೆ ಮಾಡಿ

Advertisements
Explore posts in the same categories: Home, Kannada, Literature

9 Comments on “One Year Later”

  1. praneshachar Says:

    bahala hrudayasparshi kavana. bahala chennagi moodi bandide.
    jjeva bhavagala novu nalivugala ringana idu jeevana
    novina henike ontithanda kaduvike manassige natuvanthe
    attyantha marmikavagi moodibandidie.

    pranesh


  2. ತುಂಬಾ ಕಷ್ಟವಾಯ್ತು ಈ ಕವನ ಓದುವಾಗ.

  3. ಪೂರ್ಣಿಮ Says:

    “ಈಗೀಗ ನಮ್ಮ ಮನೆ
    ರೇಡಿಯೊ ಹಾಡುವುದಿಲ್ಲ
    ತಂಬೂರಿ ಸ್ವರವಿಲ್ಲ
    ಕಂಠಕುಸಿರೇ ಇಲ್ಲ”… ಓದಿ ತುಂಬಾ ಬೇಸರವಾಗುತ್ತಿದೆ.

    ಅವರು ಕಳೆದ ವರ್ಷ ಬರೆದ ಪದ್ಯವೇ ಇನ್ನೂ ಕಾಡುತ್ತಿದೆ…


  4. ಎಂಥಾ ಭಾವನಾತ್ಮಕ ಕವಿತೆ…. ಒಂದೊಂದು ಸಾಲು ಕೂಡ ಒಳ ದನಿಯ ಛಾಯೆ…

  5. sunaath Says:

    ಮನಸ್ಸನ್ನು ಮಿಡಿಯುವ ಕವನ

  6. Prashanth M Says:

    ಹೃದಯಸ್ಪರ್ಶಿ ಕವನ…

  7. Srik Says:

    Very very touching…


  8. I really wish I could read/understand that.


  9. @ All:

    Thank you, what else can I say?


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s


%d bloggers like this: