Archive for the ‘Love’ category

Solitude

May 14, 2007

I was zipping past the streets of Phoenix, changing the FM stations at regular intervals. And, 99.9 soft rock started playing the ever melodious “There she goes, There she goes again”, by ‘Sixpence None The Richer’. That band is very artistic and creative. Alas, they split. Anyway, I am digressing here. I love that song and I also know that it is one of her all time favorites. I couldn’t help but think of one of my poems.

               ಏಕಾಂತ

ಮೌನ ತಬ್ಬಿದ ಕಡಲ ತಡಿಯಿದೆ
ಹರೆಯದಿಳೆಗೆ ಹಸಿರು ಬಳೆಯಿದೆ
ರಸಿಕ ಜೀವಕೆ ಮತ್ತ ಬರಿಸುವ
ಚಿತ್ತ ಚಂಚಲೆ ಎಲ್ಲಿಹೆ ?

ರವಿಗೆ ಉಷೆಯಲಿ ಸ್ವರ್ಗ ಸುಖವಿದೆ
ಚಂದಿರಗೊ ತಾರೆಯರ ಜೊತೆಯಿದೆ
ಮದನನಾಟಕೆ ಪದವ ಹಾಡುವ
ಸರಸಿ ಬಾರೆಯ ಇಲ್ಲಿಗೆ ?

ಬದುಕು ಬಯಸುವ ಸಿರಿಯ ಸೊಗವಿದೆ
ಮನಸಿನಾಳದಿ ಪ್ರೀತಿ ಹದವಿದೆ
ಪ್ರೇಮದುಲ್ಕೆಗೆ ತಂಪನೆರೆಯುವ
ಸಂಚ ಮರೆತಿಹೆ ಏತಕೆ ?

ಬೆಚ್ಚಗಿನ ಕಲ್ಪನೆಗೆ ಮುದವಿದೆ
ಯೌವ್ವನದ ಬಿಸಿಯಲ್ಲಿ ಹುರುಪಿದೆ
ಕನಸ ಕನ್ಯೆಯೆ ಸ್ಪರ್ಷ ಭಾಷೆಗೆ
ಕವಿಯ ಮಿಡಿತವು ಸಾಲದೆ ?

Advertisements