Archive for the ‘Literature’ category

A ‘Noble’ Story

October 21, 2008
Kuvempu

Kuvempu

The break was great!!! I didn’t want to close the blog because I knew I would want to come back and write more. There were several instances when I wanted to start blogging again – Sarah Palin, Economic mess, Listening to ‘Jolene’ the other night, and of course Sachin Tendulkar‘s (aka GOD) world record. But, nothing triggered me as much as this news item did. Now, I know what my passion is 🙂

Kuvempu is undoubtedly one of the greatest writers in Kannada. He is in the elite group with such greats as Bendre and Dr. Shivaram Karanth. Around 20 years ago there was a lot of talk about Kuvempu’s name being considered by the Nobel committee for an award in literature. If he had won the Nobel, it would have certainly been great for India. He didn’t and it’s history now. Not winning Nobel in no way diminishes the greatness of Kuvempu as a writer.

Fast forward to 2008. Kuvempu is dead. There is a symposium about Kuvempu’s work ‘Sri Ramayana Darshanam‘ in Mysore and Kuvempu’s self-proclaimed disciple Dr. S. Prabhushankar comes up with a brilliant story. Apparently, he was carrying Kuvempu’s works to New Delhi to the Indian Nobel committee. When he reached the railway station, there was no seat reserved for him. Finally, some ‘North Indian’ (that’s the key) threw Kuvempu’s books into a corner and treated it like trash. And thus, because of some North Indian conspiracy, Kuvempu didn’t win Nobel. Dr S. Prabhushankar came out with this colorful story in 2008, long after Kuvempu’s death.

The media has carried the story with all the color and prominence. These self-proclaimed disciples of Kuvempu always had problems. De. Ja. Gow for one, I have absolutely no respect for. Now, Dr. Prabhushankar joins the same bandwagon?

A few innocent questions for Dr. Prabhushankar:

  • Why did you keep quite for so long? If the story were true and if you had made this public at that time, maybe Kuvempu would have won the Nobel. So, I guess you are really responsible for Kuvempu not winning Nobel.
  • The Nobel committee in Delhi wanted you to carry all of Kuvempu’s works in a train from Mysore? Really, they didn’t know who Kuvempu was, huh?
  • It must have been quite hard to travel in an unreserved compartment. Did you get good sleep?
  • Sorry, but I have to ask you this, when the ‘North Indian’ threw Kuvempu’s works away, did you cry? If so, how much? Did you make sure someone took a photograph? That will come in handy very soon, I am sure.
  • Did you happen to ask the name of that ‘North Indian’ idiot?

Well, I have way too many questions, I will just stop here. Isn’t it sad that everyone wants to do politics and somehow want to see their name in the newspapers?

In this case Dr. Prabhushankar is the first culprit and media (as usual) is the second culprit. With all due respects, it’s time people start completely ignoring anything and everything which comes out of the likes of De. Ja. Gow and Prabhushankar.

Well, at least Karnad and URA are intelligent…….

One Year Later

March 31, 2008

I will just post a poem which my mother wrote. As for my feelings, I will just keep it within myself!!!

ಮುಂದೇನೋ???

ಈಗೀಗ ನಮ್ಮ ಮನೆ
ಗೇಟು ಕಿರುಗುಡುವುದಿಲ್ಲ
ಕದ ಬಡಿಯುವುದಿಲ್ಲ
ಫೋನು ರಿಂಗಣಿಸುವುದಿಲ್ಲ
ಮನೆಗೆ ಬರುವವರಿಲ್ಲ
ನೀನಳಿದ ಮೇಲೆ ಸಖ
ಮನೆಗೆ ನಾನೊಬ್ಬಳೆಯೆ
ಉಸಿರಿಡುತಿಹ ಒಬ್ಬೊಂಟಿ!!

ಈಗೀಗ ನಮ್ಮ ಮನೆ
ಗಿಡಬಳ್ಳಿ ನಗುವುದಿಲ್ಲ
ಹೂವು ಅರಳುವುದಿಲ್ಲ
ತೋಟ ಲಕಲಕ ಹೊಳೆಯುವುದಿಲ್ಲ
ಗಿಡಬಳ್ಳಿಗಳಿಗೆ ನೀರೂಡುವವರಿಲ್ಲ
ನೀನಳಿದ ಮೇಲೆ ಸಖ
ಮನೆಗೆ ನಾನೊಬ್ಬಳೆಯೆ
ಉಸಿರಿಡುತಿಹ ಒಬ್ಬೊಂಟಿ!!

ಈಗೀಗ ನಮ್ಮ ಮನೆ
ಅಡಿಗೆಮನೆ ಘಮಗುಡುವುದಿಲ್ಲ
ಹಬ್ಬಹರಿದಿನದ ಸಂಭ್ರಮವಿಲ್ಲ
ಭಕ್ಷ್ಯಭೋಜ್ಯಗಳಿಲ್ಲ
ತಿನ್ನುವಾಸಕ್ತಿ ಇಲ್ಲ
ನೀನಳಿದ ಮೇಲೆ ಸಖ
ಮನೆಗೆ ನಾನೊಬ್ಬಳೆಯೆ
ಉಸಿರಿಡುತಿಹ ಒಬ್ಬೊಂಟಿ!!

ಈಗೀಗ ನಮ್ಮ ಮನೆ
ಪುಸ್ತಕ ಭಂಡಾರ ತೆರೆಯುವುದಿಲ್ಲ
ಪತ್ರಿಕೆಯ ಓದುವವರಿಲ್ಲ
ಕಥೆಕಾವ್ಯ ಬರೆಯುವವರಿಲ್ಲ
ಕಣ್ಣೆಲ್ಲ ಬರಿ ಮಂಜು ಮಂಜು
ನೀನಳಿದ ಮೇಲೆ ಸಖ
ಮನೆಗೆ ನಾನೊಬ್ಬಳೆಯೆ
ಉಸಿರಿಡುತಿಹ ಒಬ್ಬೊಂಟಿ!!

ಈಗೀಗ ನಮ್ಮ ಮನೆ
ರೇಡಿಯೊ ಹಾಡುವುದಿಲ್ಲ
ತಂಬೂರಿ ಸ್ವರವಿಲ್ಲ
ಕಂಠಕುಸಿರೇ ಇಲ್ಲ
ಕಿವಿಯೆಲ್ಲ ಬರಿ ಮಂದ ಮಂದ
ನೀನಳಿದ ಮೇಲೆ ಸಖ
ಮನೆಗೆ ನಾನೊಬ್ಬಳೆಯೆ
ಉಸಿರಿಡುತಿಹ ಒಬ್ಬೊಂಟಿ!!

ಭಣಗುಡುವ ಮುಂಜಾನೆ ಸಂಜೆಯಲಿ
ಇರುಳ ನೀರವತೆಯಲಿ
ಕ್ಷಣವ ಯುಗ ಮಾಡುತ್ತ
ತೆವಳುತಿಹ ಈ ಕಾಲ
ಸರಿವ ಲಕ್ಷಣವಿಲ್ಲ
ನೀನಳಿದ ಮೇಲೆ ಸಖ
ಮನೆಗೆ ನಾನೊಬ್ಬಳೆಯೆ
ಉಸಿರಿಡುತಿಹ ಒಬ್ಬೊಂಟಿ!!

ಜೀವಸಖ ನೀನಿರುವ ತನಕ
ಸ್ವರ್ಗವೇ ಇಳೆಗಿಳಿದು ಬಂದಂತಿತ್ತು
ಜೋಡಿ ಹಕ್ಕಿಯ ಬಾಳು
ಹಾಡಾಗಿ ಹರಿದಿತ್ತು
ಏಕೆ ನಡೆದೆಯೊ ಹೀಗೆ
ನಡುನೀರಿನಲಿ ಬಿಟ್ಟು
ಒಂಟಿ ಬಾಳಿಗೆ ತಳ್ಳಿ
ಕಣ್ಣೀರ ಕಥೆ ಮಾಡಿ

Temple

February 27, 2008

What do you do on the first birthday after death? 

ದೇಗುಲ

ಗಂಟೆ ಜಾಗಟೆ ತಮಟೆ ವಾದ್ಯಗಳ ದನಿಯಿಲ್ಲ
ಬರಿ ಮೌನ, ಬರಿ ಧ್ಯಾನ
ಭಕುತರ ಮನಗಳಲಿ ಹಳೆಯದೇ ಬೇಡಿಕೆ
ಮತ್ತದೇ ಪ್ರಾರ್ಥನೆ
ಹೋಮಕುಂಡದ ಒಳಗೆ ಎಳ್ಳುದೀಪ
ತೀರ್ಥಕ್ಕೆ ತುಳಸಿ ಎಲೆ
ಆರತಿಗೆ ಕರ್ಪೂರ
ಮುಂಜಾನೆ ಮುತ್ತೈದೆ
ಸಂಜೆ ಹುಡುಗರ ದಂಡು
ದಿನವೆಲ್ಲ ಜನಜಾತ್ರೆ
ಕುರುಡು ಯಾತ್ರೆ

ಬಿಳಿ ಹೊದ್ದ ಅರ್ಚಕರ
ಮುಖದಲ್ಲಿ ಅದೇ ನಗುವು
ಕಾಲ್ಮುಟ್ಟಿ, ಕೈ ಹಿಡಿದು
ಮೌನದಲೆ ಮಾತಾಡಿ
ಮನೆಗೆ ಹೊರಳುವ ಮುನ್ನ
ಒಮ್ಮೆ ನೋಡುವ ಬಯಕೆ
ತಡೆಯಲಾಗದು ಮನಕೆ
ಗರ್ಭಗುಡಿ ಒಳಹೊಕ್ಕು
ಎಲ್ಲೆಲ್ಲಿ ಹುಡುಕಿದರು
ಕತ್ತಲೆಯ ಕೋಣೆಯಲಿ
ದೇವರಿಲ್ಲ

A Wish

December 31, 2007

Wish you all a very Happy New Year 2008!!!

ಆಶಯ

ಕಾಲನರಮನೆಯಲ್ಲಿ ಹಬ್ಬದೌತಣ
ನೊಂದವರು, ಬೆಂದವರು
ಕರಿನೆರಳ ಮುಖದವರು
ಅಪಶ್ರುತಿಯ ಹಿಡಿದವರು
ಕಲ್ಯಾಣಿ ನುಡಿದವರು
ಹೊಸಗೀತೆ ಬರೆದವರು
ಬಲ್ಲಿದರು, ಮಾಂತ್ರಿಕರು
ಎಲ್ಲರೂ ಬರುತಿಹರು!!

ಮೃತ್ಯು ಮಂಟಪದಲ್ಲಿ ಕೆಂಪು ತರ್ಪಣ
ಕಣ್ಣೀರ ಕೊಡ ಹೊತ್ತು
ಬದುಕನ್ನು ಅರಿತವರು
ರುದ್ರಾಕ್ಷಿ ಹಿಡಿಯದೆಯೆ
ಋಷಿಯ ಒಳಹೊಕ್ಕವರು
ಕಲಬೆರಕೆ ಹೆಣ್ಣುಗಳ
ತೊಡೆಗಳಲಿ ಮೆರೆದವರು
ಎಲ್ಲರೂ ಸೇರಿಹರು!!

ಭೂಮಿ ಬಸುರಿನ ಒಳಗೆ ಜೀವ ನರ್ತನ
ಮುಗ್ಧ ನಗುವನು ಹೊತ್ತು
ಹಾಲ್ಗನಸ ಹೆಣೆಯುವರು
ಹಸಿರು ಜೋಕಾಲಿಯಲಿ
ಹೂಗಳನು ಹರಡುವರು
ಪ್ರೇಮ ಕವಿತೆಯ ಬಿಸಿಗೆ
ಮುತ್ತಿನಲೆ ಕರಗುವರು
ಎಲ್ಲರೂ ಕುಣಿಯುವರು!!

ಕನ್ನಡದ ಹಬ್ಬ ಸಿಹಿಯಾಗಿರಲಿ….

November 1, 2007

ಏರಿಸು ಹಾರಿಸು
ಕನ್ನಡದ ಬಾವುಟ
ಓಹೋ ಕನ್ನಡ ನಾಡು
ಆಹಾ ಕನ್ನಡ ನುಡಿ
ಹಾರಿಸು ತೋರಿಸು
ಕೆಚ್ಚೆದೆಯ ಬಾವುಟ
 – ಬಿ.ಎಂ.ಶ್ರೀ

ನಡುನಾಡೆ ಇರಲಿ ಗಡಿನಾಡೆ ಇರಲಿ
ಕನ್ನಡದ ಕಳೆಯ ಕೆಚ್ಚೇವು
ಮರೆತೇವು ಮರವ ತೆರೆದೇವು ಮನವ
ಎರೆದೇವು ಒಲವ ಹಿರಿನೆನಪಾ
ನರನರವನೆಲ್ಲ ಹುರಿಗೊಳಿಸಿ ಹೊಸೆದು
ಹಚ್ಚೇವು ಕನ್ನಡದ ದೀಪ
 -ಡಿ.ಎಸ್.ಕರ್ಕಿ

ನೀ ಮೆಟ್ಟುವ ನೆಲ ಅದೆ ಕರ್ನಾಟಕ
ನೀನೇರುವ ಮಲೆ ಸಹ್ಯಾದ್ರಿ
ನೀ ಮುಟ್ಟುವ ಮರ ಶ್ರೀಗಂಧದ ಮರ
ನೀ ಕುಡಿಯುವ ನೀರ್ ಕಾವೇರಿ
 -ಕುವೆಂಪು

ಹಸುರಿನ ಗಿರಿಗಳ ಮಲೆಗಳ ನಾಡೆ
ನದ ನದಿ ತೊರೆಗಳ ಪುಣ್ಯದ ಬೀಡೆ
ಖಗಮಿಗ ಮೃಗ ಕೋಗಿಲೆಗಳ ನಾಡೆ
ಗಂಧ ಸುಗಂಧದ ಪಾವನ ಬೀಡೆ
 -ಎಚ್.ಆರ್.ಲೀಲಾವತಿ

ಕನ್ನಡ ಜನ ಕನ್ನಡತನ
ಕನ್ನಡ ತನುಮನ
ಕನ್ನಡ ಮಾತು ಸುಂದರ
ಕನ್ನಡ ಮನಸು ಸುಂದರ
 -ಸಂಧ್ಯಾ ರವೀಂದ್ರನಾಥ್

Light

August 8, 2007

I just signed a consent letter for using one of my poems in an album. This time I am sure the music will be really nice since the music director is one of my favorites.

Here’s the song…oooops, just the lyrics:

ದೀಪ

ದೀಪಗಳ ಹಬ್ಬದಲಿ ಚಂದಿರನು ಸರಿದಾಗ
ಕಂಗಳನು ಸೆಳೆದದ್ದು ನಿನ್ನ ಹಣತೆ
ಒಲವಿನಂಗಳದಲ್ಲಿ ಪ್ರೀತಿ ಮರೆಯಾದಾಗ
ಹೃದಯವನು ಮೀಟಿದ್ದು ನಿನ್ನ ಕವಿತೆ

ಭರವಸೆಯ ಶಿಖರದಲಿ ಸೋಲೆ ಗೆಲುವಾದಾಗ
ಕೈಹಿಡಿದು ನಡೆಸಿದ್ದು ನಿನ್ನ ಸ್ಫೂರ್ತಿ
ಪ್ರೇಮ ಮಂದಿರದಲ್ಲಿ ಭಕ್ತಿ ಬರಿದಾದಾಗ
ಮನಸನ್ನು ಬೆಳಗಿದ್ದು ನಿನ್ನ ಕಾಂತಿ

ಯೌವ್ವನದ ಸುಳಿಯಲ್ಲಿ ದಿಕ್ಕು ಬದಲಾದಾಗ
ಹೆಜ್ಜೆಗಳ ಬೆಸೆದದ್ದು ನಿನ್ನ ಛಾಯೆ
ಸರಸ ಮಂಟಪದಲ್ಲಿ ರಸಕ್ರೀಡೆ ಮುಗಿದಾಗ
ದೇಹವನು ತಣಿಸಿದ್ದು ನಿನ್ನ ಮಾಯೆ

ಜೀವನದ ಪಯಣದಲಿ ನಾ ಒಂಟಿಯಾದಾಗ
ಆಸರೆಯ ನೀಡಿದ್ದು ನಿನ್ನ ಸ್ನೇಹ
ಕಾರ್ತೀಕದಿರುಳಿನಲಿ ನಾ ಕವಿತೆ ಬರೆದಾಗ
ಮೈಮನವು ಬಯಸಿದ್ದು ನಿನ್ನ ಮೋಹ

And The Winner Is….

July 17, 2007

Alright, I was shy and red for the past few days. But, yesterday night, my wife convinced me that it is nice to share good things with the World. So, here’s something which I had mentioned only to six people – J, R, V, V, S and K – and one of them doesn’t even know Kannada!!!

Amma called me up a few days back from India to say that there was a letter from Kannada Sahitya Parishath. My book has been selected for a Sahitya Parishath prize and I have been awarded for being a “ಉದಯೋನ್ಮುಖ ಕವಿ”.

I believe the award ceremony will be held soon. Amma will go and collect it on my behalf. Oh well, I am happy. You be too 🙂